¡Sorpréndeme!

ಗಣಿ ಇಲಾಖೆಯಿಂದ 5450 ಕೋಟಿ ಭ್ರಷ್ಟಾಚಾರ: ಕುಮಾರಸ್ವಾಮಿ | Oneindia Kannada

2018-01-13 1 Dailymotion

ರಾಜ್ಯ ಗಣಿ ಇಲಾಖೆಯಿಂದ 2062 ಕೋಟಿ ಹಗರಣ ನಡೆದಿದೆ, ಇದಕ್ಕೆ ಮುಖ್ಯಮಂತ್ರಿಗಳ ಕಚೇರಿಯನ್ನು ಬಳಸಿಕೊಳ್ಳಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ನಗರದಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಟೆಂಡರ್, ಅಗ್ರಿಮೆಂಟ್ ಇಲ್ಲದೆಯೇ 3 ಕಂಪೆನಿಗಳಿಗೆ ಸಂಡೂರು ಬಳಿಯ ಸುಬ್ಬರಾಯನಹಳ್ಳಿ ಬಳಿ ಗಣಿಗಾರಿಕೆ ಮಾಡಲು ಅವಕಾಶ ನೀಡಲಾಗಿದೆ, ಈ ಕಂಪೆನಿಗಳು ನಿಯಮಕ್ಕೆ ವಿರುದ್ಧವಾಗಿ 30 ಲಕ್ಷ ಟನ್ ಅದಿರು ಉತ್ಖನನ ಮಾಡಿವೆ ಎಂದು ಅವರು ಗಂಭೀರ ಆರೋಫ ಮಾಡಿದರು. ಈ ಎಲ್ಲಾ ಅಕ್ರಮಗಳು ಅಧಿಕಾರಿ ತುಷಾರ್ ಅವರ ಸಮಯದಲ್ಲೇ ಆಗಿದ್ದು, ಎಲ್ಲಾ ಅಕ್ರಮಗಳಿಗೂ ಸಿಎಂ ಕಚೇರಿಯ ಬೆಂಬಲ ಇದೆ, ಸಿಎಂ ಕಚೇರಿಯಲ್ಲಿಯೇ ಸುಳ್ಳು ದಾಖಲೆಗಳನ್ನು ತಯಾರಿಸಲಾಗಿದೆ, ಹೀಗಾಗಿ ತುಷಾರ್ ಅವರನ್ನು ಸಿಎಂ ಕಚೇರಿಯಲ್ಲಿಯೇ ಉಳಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.


HD Kumarswamy had called a press meet today and talks about the scandals done by the congress government in the state